Growth of Rs.2000 cr Net Worth DTDC courier company
September 25, 2025
September 29, 2025,4:49:10 PM
ಬೆಂಗಳೂರು, ಮೇ 31, 2024: 2020ರಲ್ಲಿ ಪ್ರಾರಂಭಿಸಲಾದ ಮ್ಯಾಗ್ಗಿಯ 'Desh ke liye 2 minute' ಉಪಕ್ರಮವು, ಸಣ್ಣ ಕ್ರಿಯೆಗಳ ಮೂಲಕ ಮಹತ್ತರವಾದ ಪ್ರಭಾವ ಬೀರುವ ಗುರಿ ಹೊಂದಿದೆ. ಇದರ ಗುರಿಗಳ ಪೈಕಿ ಒಂದೆಂದರೆ, ಒಂದು-ಬಾರಿ ಬಳಕೆಯ ಪ್ಲಾಸ್ಟಿಕ್‌ಗೆ ದೀರ್ಘಕಾಲ ಇರುವಂತಹ ಪರ್ಯಾಯಗಳನ್ನು ಒದಗಿಸುವುದು. ಈ ಧ್ಯೇಯೋದ್ದೇಶಕ್ಕೆ ಅನುಗುಣವಾಗಿ, ಮ್ಯಾಗ್ಗಿ, ನೆಸ್ಲೆ R&D ಇಂಡಿಯಾದ(Nestlé S.Aದ ಅಧೀನ ಸಂಸ್ಥೆ ಹಾಗೂ ನೆಸ್ಲೆದ ಜಾಗತಿಕ R&D ಕಾರ್ಯಜಾಲದ ಭಾಗ) ಮತ್ತು ಭಾರತೀಯ ಸ್ಟಾರ್ಟ್-ಅಪ್ ಆದ ತ್ರಿಶೂಲದ(Trishula.)ಸಹಭಾಗಿತ್ವದೊಂದಿಗೆ ತಿನ್ನಬಹುದಾದ ಫೋರ್ಕ್ ಪರಿಚಯಿಸಿದೆ.
ಗೋಧಿ ಹಿಟ್ಟಿನಿಂದ ತಯಾರಿಸಲಾಗಿರುವ ಈ ವಿನೂತನ ಫೋರ್ಕ್, ಮ್ಯಾಗ್ಗಿ ಕಪ್ಪ ನೂಡ್ಲ್ಸ್‌ಅನ್ನು ತಿನ್ನುವ ಆನಂದಮಯ ಅನುಭವವನ್ನು ವರ್ಧಿಸಿ, ಅದರ ರಸವಾದ ಚಪ್ಪರಿಸುವ ಮಸಾಲೆದಾರ್ ಆಕರ್ಷಣೆಗೆ ಇನ್ನಷ್ಟು ಸೇರಿಸುತ್ತದೆ. 2023ರ ಆರಂಭದಲ್ಲಿ ಮ್ಯಾಗ್ಗಿ ಭಾರತದಲ್ಲಿ ಮಡಚಿಡಬಹುದಾದ, ಕೊಳೆಯಬಲ್ಲ ಫೊರ್ಕ್‌ಗಳನ್ನು ಪರಿಚಯಿಸಿತ್ತು. ಇದನ್ನು, ಸ್ವೈಟ್ಜ್‌ಲೆಂಡಿನ, ಲಾಸನ್ನೆಯಲ್ಲಿರುವ ನೆಸ್ಲೆ ಇನ್ಸ್‌ಟಿಟ್ಯೂಟ್ ಆಫ್ ಪ್ಯಾಕೇಜಿಂಗ್ ಸೈನ್ಸಸ್, ಕಣಿಕ ಇಂದಿಯಾ ಪ್ರೈ ಲಿ., ಹಾಗೂ ನೆಸ್ಲೆ ಇಂಡಿಯಾ R&Dದ ಸಹಯೋಗದೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿತ್ತು. ಮಡಚಿಡಬಹುದಾದ, ಕೊಳೆಯಬಲ್ಲ ಪೋರ್ಕ್‌ಗಳ ಪರಿಚಯವು, ವಾರ್ಷಿಕವಾಗಿ, ಸರಿಸುಮಾರು 35 MTನಷ್ಟು ಪ್ಲಾಸ್ಟಿಕ್ ಕಡಿಮೆ ಮಾಡಬಲ್ಲದು. ತಿನ್ನಬದುದಾದ ಫೊರ್ಕ್‌ಗಳ ಈ ಪರೀಕ್ಷಾ ಪರಿಚಯದ ಕುರಿತು ಮಾತನಾಡುತ್ತಾ, ನೆಸ್ಲೆ ಇಂಡಿಯಾದ ಫುಡ್ಸ್ ವಿಭಾಗದ ನಿರ್ದೇಶಕ ಶ್ರೀ ರಜತ್ ಜೈನ್, “ನೆಸ್ಲದಲ್ಲಿ ನಾವು ನಮ್ಮ ಗ್ರಾಹಕರಿಗಾಗಿ ಮತ್ತು ಈ ಭೂಮಿಗಾಗಿ ಇನ್ನೂ ಉತ್ತಮವಾದ ಭವಿಷ್ಯತ್ತನ್ನು ನಿರ್ಮಾಣ ಮಾಡಲು ಹೊಸ ವಿಧಾನಗಳನ್ನು ಪ್ರಯತ್ನಿಸುತ್ತಲೇ ಇರುತ್ತೇವೆ. ಕಪ್ಪ ನೂಡ್ಲ್ಸ್‌ನಲ್ಲಿ ತಿನ್ನಬಹುದಾದ ಫೋರ್ಕ್‌ಗಳ ಪರಿಚಯವು, ಗ್ರಾಹಕ-ಕೇಂದ್ರಿತ ಉಪಕ್ರಮಗಳನ್ನು ಮುನ್ನಡೆಸುವ ಸಮಯದಲ್ಲೇ, ಪರಿಸರ ಜವಾಬ್ದಾರಿಯೆಡೆಗೆ ನಮ್ಮ ಬದ್ಧತೆಯಲ್ಲಿ ಮಹತ್ತರವಾದ ಮೈಲಿಗಲ್ಲಾಗಿದೆ.
ಈ ವಿನೂತನ ಆವಿಷ್ಕಾರವು, ತನ್ನ ವಿಧದಲ್ಲೇ ಮೊಟ್ಟಮೊದಲನೆಯದಾದ ಎರಡು-ಪೀಸ್ ಫೊರ್ಕ್ ವಿನ್ಯಾಸವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯು, ನಮ್ಮ ಜಾಗತಿಕ R&D ಸಾಮರ್ಥ್ಯಗಳಿಗೆ ಪುರಾವೆಯಾಗಿದೆ. ಈ ಪರಿಚಯವು, ಇನ್ನೂ ಹೆಚ್ಚು ಹಸಿರಾದ ಪರಿಹಾರಗಳಿಗಾಗಿ ಪ್ರಬಲ ಮುನ್ನೆಲೆಯನ್ನು ಸ್ಥಾಪಿಸಲಿದೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು. ನೆಸ್ಲೆ R&D ಸೆಂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(Nestlé SAದ Société des Produitsನ ಸಂಪೂರ್ಣ ಮಾಲೀಕತ್ವದ ಅಧೀನ ಸಂಸ್ಥೆ) ಮುಖ್ಯಸ್ಥರಾದ ಶ್ರೀ ಜಗದೀಪ್ ಮರಹರ್ “ನಮ್ಮ ಜಾಗತಿಕ ಪ್ಯಾಕೇಜಿಂಗ್ ನೈಪುಣ್ಯತೆ ಹಾಗೂ ಇದರೊಡನೆ, ನಮ್ಮ ಸ್ಥಳೀಯ ಪ್ಯಾಕೇಜಿಂಗ್ ನಿಪುಣರ ಅಂತರ್ದೃಷ್ಟಿಗಳು, ಪ್ಲಾಸ್ಟಿಕ್ ಕಡಿಮೆ ಮಾಡಲು ವಿನೂತನವಾದ ವಿಧಾನಗಳನ್ನು ಶೋಧಿಸಿ ಪರೀಕ್ಷಿಸಲು ನಮಗೆ ಅವಕಾಶ ಮಾಡಿಕೊಡುತ್ತದೆ.
ಸ್ಥಳೀಯ ಗ್ರಾಹಕರು ಅಂಗೀಕರಿಸುವಂತಹ ಮೌಲ್ಯ ಸರಪಳಿಯಾದ್ಯಂತ ಪ್ಲಾಸ್ಟಿಕ್‌ಗಳ ಬಳಕೆಯನ್ನು ಗರಿಷ್ಟಗೊಳಿಸಿ, ದೀರ್ಘಕಾಲ ಉಳಿಯುವಂತಹ ಪರ್ಯಾಯಗಳನ್ನು ಸೃಷ್ಟಿಸಲು ನಮ್ಮ ತಂಡಗಳು ಸತತವಾಗಿ ವಿನೂತನವಾದ ಪ್ಯಾಕೇಜಿಂಗ್ ಸಾಮಗ್ರಿಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ನಿರಂತರವಾಗಿ ಶೋಧಿಸ್ತ್ತಲೇ ಇರುತ್ತಾರೆ.” ಎಂದರು. ತಿನ್ನಬಹುದಾದ ಫೋರ್ಕ್‌ಗಳ ಪರಿಚಯವನ್ನು ಪ್ರಸ್ತುತ ಸೀಮಿತ ಅವಧಿಯ ಕೊಡುಗೆ ಎಂದು ಯೋಜಿಸಲಾಗಿದೆ, ತಿನ್ನಬಹುದಾದ ಫೋರ್ಕ್ ಇರುವ ಮ್ಯಾಗ್ಗಿ ಕಪ್ಪ ನೂಡ್ಲ್ಸ್, ಮೇ ’24ರಿಂದ ಆರಂಭಗೊಂಡು, ಪ್ರಮುಖ ಮೆಟ್ರೋ ನಗರಗಳಲ್ಲಿ ಲಭ್ಯವಿದ್ದು,79.5 ಗ್ರಾಂ ಪ್ಯಾಕ್‌ನ ಬೆಲೆ ರೂ. 50 ಆಗಿರುತ್ತದೆ.
© 2024 Iconsofindianbusiness.com. All Right Reserved.