ಭಾರತದಲ್ಲಿ 25 ವರ್ಷಗಳನ್ನು ವೈಭವದಿಂದ ಕಳೆದ ಸಂಭ್ರಮದಲ್ಲಿ 'ವರ್ಕ್ ಬೆಟರ್ ಕಾನ್ಫರೆನ್ಸ್' ಆಯೋಜಿಸಿದ ಸ್ಟೀಲ್‌ಕೇಸ್

  • 15
  • 0
/files/steel_case.jpg

ಸ್ಟೀಲ್‌ಕೇಸ್ ಕಂಪನಿಯು ಭಾರತದ ಪ್ರಮುಖ ಉದ್ಯಮ ನಾಯಕರು ಭಾಗವಹಿಸಿದ್ದ ವರ್ಕ್ ಬೆಟರ್ ಕಾನ್ಫರೆನ್ಸ್ ಅನ್ನು ಆಯೋಜಿಸಿತ್ತು ಮತ್ತು ಈ ಸಂದರ್ಭದಲ್ಲಿ ಕರ್ಮನ್® ಹೈ ಬ್ಯಾಕ್ ಎಂಬ ಚೇರ್ ಅನ್ನು ಅನಾವರಣಗೊಳಿಸಿತು  ಕಂಪನಿಯ ಉತ್ಪನ್ನ ಸಾಲಿಗೆ ಸಿಂಪ್ಲಿಇಂಡಿಯಾ ಸಂಗ್ರಹವನ್ನು ಸೇರಿಸುವ ಮೂಲಕ ಸ್ಟಾನ್ಲಿ ಲೈಫ್‌ಸ್ಟೈಲ್ಸ್‌ ಜೊತೆಗಿನ ಸಹಯೋಗವನ್ನು ಸ್ಟೀಲ್‌ಕೇಸ್‌ ಗಟ್ಟಿಗೊಳಿಸಿದೆ  ಭಾರತದ ಉದಯೋನ್ಮುಖ ವಿನ್ಯಾಸ ಮತ್ತು ವಾಸ್ತುಶಿಲ್ಪ ಪ್ರತಿಭೆಗಳಿಗೆ ಅನನ್ಯ ಅವಕಾಶಗಳನ್ನು ಒದಗಿಸಲು ಸಿಇಪಿಟಿ ವಿಶ್ವವಿದ್ಯಾಲಯದ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ ಬೆಂಗಳೂರು, ಭಾರತ, 31 ಮೇ 2024: ಕಚೇರಿ ಪೀಠೋಪಕರಣಗಳ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಸ್ಟೀಲ್‌ಕೇಸ್ ಕಂಪನಿಯು ಭಾರತದಾದ್ಯಂತ ಇರುವ ಕಚೇರಿಗಳಿಗೆ ಹೊಸ ರೂಪ ಕೊಡುತ್ತಾ, ಆ ಕ್ಷೇತ್ರದಲ್ಲಿ ನಾಯಕತ್ವ ಸಾಧಿಸುತ್ತಾ 25 ವರ್ಷಗಳನ್ನು ಪೂರೈಸಿದೆ.

ಆರಂಭಿಕ ಹಂತದಲ್ಲಿ ಜಂಟಿ ಉದ್ಯವಾಗಿ ಕೆಲಸ ಶುರು ಮಾಡಿದ ಸ್ಟೀಲ್‌ಕೇಸ್ ನಿಧಾನಕ್ಕೆ ತನ್ನ ಅಸ್ತಿತ್ವವನ್ನು ಸ್ಥಿರವಾಗಿ ವಿಸ್ತರಿಸುತ್ತಾ ಬಂದಿದೆ. ಸ್ಥಳೀಯ ಅಗತ್ಯಗಳನ್ನು ಪೂರೈಸುವ ಮತ್ತು ಸ್ಥಳೀಯ ಉತ್ಪಾದನೆಯಲ್ಲಿ ಗಣನೀಯವಾಗಿ ಹೂಡಿಕೆ ಮಾಡುವ ಮೂಲಕ ಸೂಕ್ತವಾದ ಉತ್ಪನ್ನಗಳನ್ನು ನೀಡುತ್ತಾ ಬಂದಿದೆ. ಈ ಮೂಲಕ ಕಂಪನಿಯು ಭಾರತದ ಕಚೇರಿಗಳಲ್ಲಿ ಸ್ಫೂರ್ತಿದಾಯಕ ಉದ್ಯೋಗಿ ಕೇಂದ್ರಿತ ವಾತಾವರಣ ನಿರ್ಮಿಸಲು ನೆರವಾಗಿದೆ ಮತ್ತು ಅದರಿಂದ ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳ ತೊಡಗಿಕೊಳ್ಳುವಿಕೆ ಮತ್ತು ಉತ್ಪಾದಕತೆ ಹೆಚ್ಚಿಸಲು ನೆರವಾಗಿದೆ. ಈ ಮಹತ್ವದ ಮೈಲಿಗಲ್ಲು ಸಾಧಿಸಿರುವ ನೆನಪಿಗೆ ಸ್ಟೀಲ್‌ಕೇಸ್ ಏಷ್ಯಾದಲ್ಲಿ ತನ್ನ ಮೊಟ್ಟ ಮೊದಲ ವರ್ಕ್ ಬೆಟರ್ ಕಾನ್ಫರೆನ್ಸ್ ಆಯೋಜಿಸಿದ್ದು, ಈ ಸಮಾವೇಶವು ಭಾರತದ ಬೆಂಗಳೂರಿನಲ್ಲಿ ನಡೆಯಿತು. ಈ ಅದ್ದೂರಿ ಸಮಾವೇಶದಲ್ಲಿ ಉದ್ಯಮದ ಉನ್ನತ ಹಂತದ ವೃತ್ತಿಪರರು ಭಾಗವಹಿಸಿ ಇತ್ತೀಚಿನ ಟ್ರೆಂಡ್ ಗಳು ಮತ್ತು ಕಚೇರಿ ವಿನ್ಯಾಸ ಮತ್ತು ಕಾರ್ಯಚಟುವಟಿಕೆಗಳಲ್ಲಿ ಬಳಸಬಹುದಾದ ನವೀನ ಪರಿಹಾರೋತ್ಪನ್ನಗಳ ಕುರಿತು ಸಂವಾದ ನಡೆಸಿದರು.

ಸಮಾವೇಶದಲ್ಲಿ ಭಾಗವಹಿಸಿದ ಆಸಕ್ತರು ಈ ಕೆಳಗಿನ ತಜ್ಞರ ಸಮಿತಿಯ ಜೊತೆಗೆ ಸಂವಾದ ನಡೆಸುವ ಅವಕಾಶ ಪಡೆದರು:  ಲಲಿತ್ ಅಹುಜಾ, ಎಎನ್ಎಸ್ಆರ್, ಸಿಇಓ  ಡಾ. ಅರವಿಂದ್ ಸುಬ್ರಮಣಿಯನ್, ರಿಲಯನ್ಸ್‌ನ ಮಾನವ ಸಂಪನ್ಮೂಲ ವಿಭಾಗದ ವಿಪಿ  ಸಲೀಂ ಭಟ್ರಿ, ಸಿಇಪಿಟಿ ವಿಶ್ವವಿದ್ಯಾಲಯದ ಡಿಸೈನ್ ಫ್ಯಾಕಲ್ಟಿ ಡೀನ್  ಸುನಿಲ್ ಸುರೇಶ್, ಸ್ಟಾನ್ಲಿ ಲೈಫ್‌ಸ್ಟೈಲ್‌ನ ಸಿಇಓ ಈ ತಜ್ಞರ ತಂಡವು ಅಭಿವೃದ್ಧಿ ಹೊಂದುತ್ತಿರುವ ಕೆಲಸದ ಸ್ಥಳಗಳು, ಸಹಯೋಗ ಮತ್ತು ಹೆಚ್ಚು ಉತ್ಪಾದಕತೆ ಸಾಧಿಸುವಲ್ಲಿ ವಿನ್ಯಾಸದ ಪಾತ್ರದ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಸ್ಟೀಲ್‌ಕೇಸ್ ತನ್ನ ಇತ್ತೀಚಿನ ಹೊಸ ಆವಿಷ್ಕಾರವಾದ ಕರ್ಮನ್® ಎಕ್ಸಿಕ್ಯೂಟಿವ್ ಹೈ-ಬ್ಯಾಕ್ ಚೇರ್ ಅನ್ನು ಅನಾವರಣಗೊಳಿಸಿತು. ಈ ಅತ್ಯಾಧುನಿಕ ಉತ್ಪನ್ನವನ್ನು ದಕ್ಷತೆ ಮತ್ತು ಸೌಂದರ್ಯದ ಸಂಯೋಜನೆಯೊಂದಿಗೆ ರೂಪುಗೊಳಿಸಲಾಗಿದ್ದು, ಆಧುನಿಕ ವೃತ್ತಿಪರರಿಗೆ ಅತ್ಯುತ್ತಮ ಕಾರ್ಯನಿರ್ವಹಣೆ ಮತ್ತು ಆರಾಮದಾಯಕತೆ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಸ್ಟೀಲ್‌ಕೇಸ್‌ನ ಭಾರತದ ವ್ಯವಸ್ಥಾಪಕ ನಿರ್ದೇಶಕ ತೀರ್ಥಂಕರ ಬಸು ಅವರು ಹೊಸ ಉತ್ಪನ್ನದ ಬಗ್ಗೆ ಹರ್ಷ ವ್ಯಕ್ತ ಪಡಿಸುತ್ತಾ, "ಭಾರತದಲ್ಲಿನ ನಮ್ಮ ಗ್ರಾಹಕರಿಗೆ ಕರ್ಮನ್® ಹೈಬ್ಯಾಕ್ ಚೇರ್ ಅನ್ನು ಪರಿಚಯಿಸಲು ನಾವು ಸಂತೋಷ ಹೊಂದಿದ್ದೇವೆ. ಈ ಇತ್ತೀಚಿನ ಉತ್ಪನ್ನವು ದಕ್ಷತೆ ಮತ್ತು ಸೌಂದರ್ಯವನ್ನು ಜೊತೆಗೂಡಿಸಿ ಅಭಿವೃದ್ಧಿ ಹೊಂದುತ್ತಿರುವ ಆಧುನಿಕ ಕಚೇರಿ ಸ್ಥಳಗಳ ಅಗತ್ಯತೆಗಳಿಗೆ ತಕ್ಕಂತೆ ಸೊಗಸಾದ ಪರಿಹಾರೋತ್ಪನ್ನಗಳನ್ನು ರಚಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ.

ಪೇಟೆಂಟ್ ಪಡೆದಿರುವ ವಿಶಿಷ್ಟವಾದ ಹೈಬ್ರಿಡ್ ಸೀಟ್ ಕರ್ಮನ್® ಅನ್ನು ಕಂಪನಿಯ ಹೊಸ ಮೆಶ್ ಮೆಟೀರಿಯಲ್ ಇಂಟರ್‌ಮಿಕ್ಸ್® ಬಳಸಿ ತಯಾರಿಸಲಾಗಿದ್ದು, ಈ ಕುರ್ಚಿಯು ಅತ್ಯುತ್ತಮ ಸೌಕರ್ಯ ಒದಗಿಸುತ್ತದೆ ಮತ್ತು ಚಂದ ಕಾಣಿಸುತ್ತದೆ. ಹಾಗಾಗಿ ಇದನ್ನು ಬಳಸುವ ಎಲ್ಲಾ ವೃತ್ತಿಪರರು ದಿನವಿಡೀ ಆರಾಮವಾಗಿ ಕೆಲಸ ಮಾಡಬಹುದಾಗಿದೆ" ಎಂದು ಹೇಳಿದರು. 2024ನೇ ವರ್ಷ ಸ್ಟೀಲ್‌ಕೇಸ್‌ಗೆ ಒಂದು ಟರ್ನಿಂಗ್ ಪಾಯಿಂಟ್ ಆಗಿದೆ. ಯಾಕೆಂದರೆ ಈ ವರ್ಷ ಕಂಪನಿಯು ಭಾರತದಲ್ಲಿ ವಿನ್ಯಾಸ ವೃತ್ತಿಪರರು ಮತ್ತು ವಿನ್ಯಾಸ ಚಿಂತನಾ ಕ್ರಮಗಳ ಬೆಳವಣಿಗೆಯಲ್ಲಿ ಪಾಲುದಾರನಾಗಿ ಮತ್ತು ವೇಗವರ್ಧಕವಾಗಿ ಎರಡೂ ಪಾತ್ರವನ್ನು ನಿರ್ವಹಿಸುವ ನಿರ್ಧಾರ ಮಾಡಿಕೊಂಡಿದೆ. ಅದರ ಪ್ರಮುಖ ಉಪಕ್ರಮದ ಭಾಗವಾಗಿ ಸ್ಟೀಲ್‌ಕೇಸ್ ಸ್ಥಳೀಯವಾಗಿ ಸಹಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಭಾರತೀಯ ನಿರ್ಮಿತ ಉತ್ಪನ್ನಗಳನ್ನು ಹೊಂದಲು ತನ್ನ ಪಾಲುದಾರ ಬ್ರಾಂಡ್‌ಗಳ ಶ್ರೇಣಿಯನ್ನು ವಿಸ್ತರಿಸುವ ಮನಸ್ಸು ಮಾಡಿದೆ. ಅದರ ಭಾಗವಾಗಿ ಸ್ಟಾನ್ಲಿ ಲೈಫ್‌ಸ್ಟೈಲ್ಸ್‌ ನಂತಹ ಪ್ರೀಮಿಯಂ ಕಂಪನಿಯಿಂದ ಕುಶಲಕರ್ಮಿಗಳು ರಚಿಸಿದ ರಗ್ಗುಗಳು, ಪ್ಲಶ್ (ಬೆಲೆಬಾಳುವ) ಸೋಫಾಗಳು ಮತ್ತು ಆಕ್ಸೆಂಟ್ ಪೀಸ್ ಗಳೆಂದು ಕರೆಯಲ್ಪಡುವ ಸಣ್ಣ ಟೇಬಲ್, ಚೇರ್ ಇತ್ಯಾದಿ ಉತ್ಪನ್ನ ತುಣುಕುಗಳನ್ನು ತಮ್ಮ ಉತ್ಪನ್ನಗಳ ಭಾಗವಾಗಿಸಿಕೊಂಡಿದೆ. ಸ್ಟೀಲ್‌ಕೇಸ್‌ನ ಉತ್ಪನ್ನ ಶ್ರೇಣಿಗೆ ಇತ್ತೀಚೆಗೆ ಸೇರ್ಪಡೆಗೊಂಡ ಹೊಸ ಸಿಂಪ್ಲಿಇಂಡಿಯಾ ಸಂಗ್ರಹವನ್ನು ಸ್ಟಾನ್ಲಿ ಲೈಫ್‌ಸ್ಟೈಲ್‌ನ ಉತ್ಪನ್ನ ತುಣುಕುಗಳನ್ನು ಬಳಸಿಕೊಂಡು ರಚಿಸಲಾಗಿದೆ. ಸ್ಟಾನ್ಲಿ ಲೈಫ್‌ಸ್ಟೈಲ್‌ ಅತ್ಯಾಧುನಿಕ ಕಲೆಗಾರಿಕೆ ಮತ್ತು ಭಾರತೀಯ ಸಂಸ್ಕೃತಿಯಿಂದ ಪ್ರೇರಿತವಾದ ವಿನ್ಯಾಸಗಳಿಗೆ ಹೆಸರಾಗಿದೆ. ಪ್ರಸ್ತುತ ಸ್ಟೀಲ್‌ಕೇಸ್ ಪಾಲುದಾರಿಕೆಯ ಭಾಗವಾಗಿ ವಿಶೇಷವಾಗಿ ಆಯ್ಕೆಮಾಡಲಾದ ವಸ್ತುಗಳನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಉತ್ಪನ್ನ ಶ್ರೇಣಿಗಳ ಜೊತೆ ಮಿಶ್ರಣ ಮಾಡಲಾಗಿದೆ. ಈ ಮೂಲಕ ಒಟ್ಟಾರೆ ವಿನ್ಯಾಸ ಪೋರ್ಟ್‌ಫೋಲಿಯೊವನ್ನು ಶ್ರೀಮಂತಗೊಳಿಸಲಾಗುತ್ತಿದೆ ಮತ್ತು ಗ್ರಾಹಕರಿಗೆ ಉತ್ತಮ ಗುಣಮಟ್ಟದ, ಪ್ರಾದೇಶಿಕ ಗುಣಗಳನ್ನು ಹೊಂದಿರುವ ಅತ್ಯುತ್ತಮ ಉತ್ಪನ್ನ ಶ್ರೇಣಿಯನ್ನು ನೀಡಲಾಗುತ್ತದೆ. ಈ ಕುರಿತು ಏಷ್ಯಾ ಪೆಸಿಫಿಕ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಸಮಂತಾ ಗಿಯಾಮ್, "ಭಾರತದಲ್ಲಿ ವಿನ್ಯಾಸ ಜಗತ್ತಿನ ಬೆಳವಣಿಗೆಗೆ ಕೊಡುಗೆ ನೀಡಲು ನಾವು ಬದ್ಧರಾಗಿದ್ದೇವೆ.

ಭಾರತದಲ್ಲಿ ಸಹಭಾಗಿತ್ವಗಳಿಂದ ನಮ್ಮ ಉತ್ಪನ್ನ ಪೋರ್ಟ್ ಫೋಲಿಯೋ ಹೊಸ ಹುರುಪು ಪಡೆಯಲಿದೆ. ಸ್ಟೀಲ್‌ಕೇಸ್ ನ ವಿಶೇಷ ಉತ್ಪನ್ನ ಸಂಗ್ರಹವಾದ ಸಿಂಪ್ಲಿಇಂಡಿಯಾ ಸಂಗ್ರಹ ಇದೀಗ ಸ್ಟ್ಯಾನ್ಲಿ ಉತ್ಪನ್ನಗಳನ್ನೂ ಒಳಗೊಂಡಿದ್ದು, ಈ ಮೂಲಕ ಅವುಗಳು ಭಾರತದಲ್ಲಿನ ಗ್ರಾಹಕರಿಗೆ ಸುಲಭವಾಗಿ ದೊರೆಯಲಿದೆ. ನಮ್ಮ ಜಾಗತಿಕ ಉತ್ಪನ್ನವಾದ ಪರ್ಸನಾಲಿಟಿ™ ಪ್ಲಸ್ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಅನುಗುಣವಾಗಿ ಭಾರತದಲ್ಲಿ ತಯಾರಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಜಾಗತಿಕವಾಗಿ ಪ್ರಸಿದ್ಧಿ ಹೊಂದಿರುವ ಥಿಂಕ್™ ಚೇರ್ ಅನ್ನು ಭಾರತೀಯ ಮಾರುಕಟ್ಟೆಗಾಗಿ ವಿಶೇಷವಾಗಿ ಭಾರತದಲ್ಲಿಯೇ ತಯಾರಿಸಲಾಗುತ್ತದೆ. ಆ ಮೂಲಕ ಸ್ಥಳೀಯ ಉತ್ಪಾದನೆ ವಿಚಾರದಲ್ಲಿ ನಾವು ಹೊಂದಿರುವ ಬದ್ಧತೆಯನ್ನು ಸಾರಿದ್ದೇವೆ. ಜಾಗತಿಕ ಮತ್ತು ಸ್ಥಳೀಯ ಉತ್ಪನ್ನಗಳ ಈ ಕ್ರಿಯಾಶೀಲ ಮಿಶ್ರಣವು ಭಾರತೀಯ ಗ್ರಾಹಕರಿಗೆ ಸ್ಟೀಲ್ ಕೇಸ್ ನ ಉತ್ತಮ ಉತ್ಪನ್ನಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ" ಎಂದು ಹೇಳಿದರು. ಸಮಾವೇಶದಲ್ಲಿ ಸ್ಟೀಲ್‌ಕೇಸ್ ಕಂಪನಿಯು ಸಿಇಪಿಟಿ ವಿಶ್ವವಿದ್ಯಾನಿಲಯದೊಂದಿಗಿನ ತನ್ನ ವಿಶೇಷ ಪಾಲುದಾರಿಕೆಯನ್ನು ಘೋಷಿಸಿದೆ. ಈ ಮೂಲಕ ಭಾರತದಲ್ಲಿನ ಉದಯೋನ್ಮುಖ ಪ್ರತಿಭೆಗಳಿಗೆ ವಿಶಿಷ್ಟ ಅವಕಾಶಗಳನ್ನು ಒದಗಿಸಲು ಸಜ್ಜಾಗಿದೆ. ಈ ಸಹಯೋಗವು ಶೈಕ್ಷಣಿಕ ಜ್ಞಾನ ಮತ್ತು ಉದ್ಯಮದ ಅಗತ್ಯತೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸೇತುವೆಯಾಗುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ವಿನ್ಯಾಸ ಮತ್ತು ವಾಸ್ತುಶಿಲ್ಪದ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಬೇಕಾಗಿರುವ ಕೌಶಲ್ಯ ಮತ್ತು ಅನುಭವವನ್ನು ಒದಗಿಸಲು ಕಂಪನಿಯು ಮುಂದಾಗಿದೆ. ಜೊತೆಗೆ, ಈ ಉಪಕ್ರಮವು ಪ್ರಾದೇಶಿಕ ಪರಿಕಲ್ಪನೆಗಳನ್ನು ಬಳಸಿಕೊಂಡು ತಮ್ಮದೇ ಮಾರುಕಟ್ಟೆಗೆ ಉತ್ಪನ್ನಗಳನ್ನು ರಚಿಸಲು ಅನುವ ಮಾಡಿಕೊಡುವ ಮೂಲಕ ಭಾರತೀಯ ವಿನ್ಯಾಸ ಪ್ರತಿಭೆಗಳಿಗೆ ಹೊಸ ಮಾರ್ಗವನ್ನು ತೆರೆಯುತ್ತದೆ. ಈ ವಿಧಾನವು ಸ್ಥಳೀಯ ಮಾರುಕಟ್ಟೆಯ ಅನನ್ಯ ಅಗತ್ಯತೆ ಮತ್ತು ಆದ್ಯತೆಗಳ ಆಳವಾದ ತಿಳುವಳಿಕೆಯನ್ನು ಹೊಂದುವುದನ್ನು ಪ್ರೇರೇಪಿಸುತ್ತದೆ ಮತ್ತು ನಮ್ಮ ಉತ್ಪನ್ನಗಳ ಪ್ರಸ್ತುತತೆ ಮತ್ತು ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಲಿದೆ.

ಭಾರತದಲ್ಲಿ 25 ವರ್ಷಗಳ ಸಂಭ್ರಮಾಚರಣೆಯಲ್ಲಿರುವ ಸ್ಟೀಲ್‌ಕೇಸ್‌ನ ಮೊದಲ ವರ್ಕ್ ಬೆಟರ್ ಕಾನ್ಫರೆನ್ಸ್ ನಾವೀನ್ಯತೆ ಮತ್ತು ಸ್ಥಳೀಯ ಸಹಯೋಗಗಳ ಮೇಲಿನ ಕಂಪನಿಯ ಬದ್ಧತೆಯನ್ನು ಪ್ರದರ್ಶಿಸಿತು. ಸ್ಟ್ಯಾನ್ಲಿ ಲೈಫ್ ಸ್ಟೈಲ್ಸ್ ನ ಉತ್ಪನ್ನ ತುಣುಕುಗಳನ್ನು ಬಳಸಿಕೊಂಡು ತಯಾರಿಸಿರುವ ಸ್ಟೀಲ್‌ಕೇಸ್ ಉತ್ಪನ್ನವಾದ ಸಿಂಪ್ಲಿಇಂಡಿಯಾ ಸಂಗ್ರಹವು ಈ ಬದ್ಧತೆಗೆ ಸೂಕ್ತ ಉದಾಹರಣೆಯಾಗಿದೆ. ಸಿಇಪಿಟಿ ವಿಶ್ವವಿದ್ಯಾನಿಲಯದ ಜೊತೆ ಪಾಲುದಾರಿಕೆ ಮಾಡುವ ಮೂಲಕ ಮತ್ತು ಸ್ಟ್ಯಾನ್ಲಿ ಲೈಫ್ ಸ್ಟೈಲ್ಸ್ ನ ಉತ್ಪನ್ನಗಳನ್ನು ಬಳಸಿಕೊಂಡು ತಯಾರಿಸಿದ ಸಿಂಪ್ಲಿಇಂಡಿಯಾ ಸಂಗ್ರಹದ ಮೂಲಕ ಸ್ಟೀಲ್‌ಕೇಸ್‌ ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಿದೆ. ಈ ಮೂಲಕ ಸ್ಟೀಲ್‌ಕೇಸ್‌ ಕೌಶಲ್ಯಪೂರ್ಣವಾಗಿ ಜಾಗತಿಕ ಪ್ರಾವೀಣ್ಯತೆಯನ್ನು ಸ್ಥಳೀಯ ಕರಕುಶಲತೆಯೊಂದಿಗೆ ಜೋಡಿಸಿದೆ. ಈ ಉಪಕ್ರಮಗಳು ವಿನ್ಯಾಸ ಜಗತ್ತನ್ನು ಬೆಳಗುವುದಲ್ಲದೆ ಭಾರತೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ಕೃಷ್ಟ ಗುಣಮಟ್ಟದ, ಸಾಂಸ್ಕೃತಿಕ ಶ್ರೀಮಂತವಾದ ಉತ್ಪನ್ನಗಳು ದೊರಕುವಂತೆ ಮಾಡುತ್ತದೆ. ಸ್ಟೀಲ್‌ಕೇಸ್‌ ಭಾರತದಾದ್ಯಂತ ಇರುವ ಕಚೇರಿಗಳಲ್ಲಿ ಸ್ಫೂರ್ತಿದಾಯಕ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ವಾತಾವರಣವನ್ನು ಉಂಟು ಮಾಡುವ ತನ್ನ ಪ್ರಯಾಣವನ್ನು ಹೆಮ್ಮೆಯಿಂದ ಮುಂದುವರಿಸುತ್ತಿದೆ. ಸ್ಟೀಲ್‌ಕೇಸ್‌ ಕುರಿತು: ಸ್ಟೀಲ್‌ಕೇಸ್, ಜಾಗತಿಕ ವಿನ್ಯಾಸ ಮತ್ತು ಕೆಲಸದ ಜಗತ್ತಿನಲ್ಲಿ ಚಿಂತನಾತ್ಮಕ ನಾಯಕನಾಗಿದೆ. ಒಂದು ಶತಮಾನಕ್ಕೂ ಹೆಚ್ಚು ಕಾಲ, ಕಲಿಕೆ, ಆರೋಗ್ಯ ಮತ್ತು ವರ್ಕ್ ಫ್ರಮ್ ಸೇರಿದಂತೆ ಕೆಲಸ ನಡೆಯುವ ಅನೇಕ ಸ್ಥಳಗಳಿಗೆ ಪೀಠೋಪಕರಣಗಳು ಮತ್ತು ಉತ್ಪನ್ನಗಳನ್ನು ರಚಿಸಲು ವಿಶ್ವದ ಪ್ರಮುಖ ಸಂಸ್ಥೆಗಳ ಜೊತೆಗೆ ನಾವು ಸಹಯೋಗ ಮಾಡಿಕೊಂಡಿದ್ದೇವೆ, ವಿನ್ಯಾಸ ಮಾಡಿದ್ದೇವೆ ಹಾಗೂ ಉತ್ಪಾದನೆ ಮಾಡಿದ್ದೇವೆ. ನಮ್ಮ ಸಂಶೋಧನೆಯ ಮೂಲಕ, ನಾವು ಪ್ರಪಂಚದಾದ್ಯಂತದ ನಮ್ಮ ಗ್ರಾಹಕರಿಗೆ ಹೊಸ ನೋಟಗಳನ್ನು ಮತ್ತು ವಿನ್ಯಾಸದ ಹೊಸತನವನ್ನು ನೀಡುತ್ತೇವೆ.


ನಮ್ಮ ಸ್ಟೀಲ್‌ಕೇಸ್ ಡೀಲರ್ ಸಮುದಾಯ, ಸ್ಟೀಲ್‌ಕೇಸ್ ಮಳಿಗೆ ಮತ್ತು ರಿಟೇಲ್ ಪಾಲುದಾರರ ಮೂಲಕ ನಮ್ಮ ಉತ್ಪನ್ನಗಳು ಜೀವ ಪಡೆದಿವೆ. ಜೊತೆಗೆ ನಾವು ನಮ್ಮ ಅತ್ಯುತ್ತಮ ಕೆಲಸವನ್ನು ಮಾಡಲು ಬದ್ಧರಾಗಿದ್ದೇವೆ. ಆದ್ದರಿಂದ ಜನರು ಮತ್ತು ಈ ಜಗತ್ತಿಗಾಗಿ ಜೊತೆಯಾಗುತ್ತೇವೆ, ಹಂಚಿಕೊಂಡು ಬಾಳುತ್ತೇವೆ. 1912ರಲ್ಲಿ ಸ್ಥಾಪನೆಯಾದ ಸ್ಟೀಲ್‌ಕೇಸ್ ಜಾಗತಿಕ ವಿನ್ಯಾಸ, ಸಂಶೋಧನೆ ಮತ್ತು ಕೆಲಸದ ಜಗತ್ತಿನಲ್ಲಿ ಚಿಂತನಾತ್ಮಕ ನಾಯಕನಾಗಿದೆ. ಜನರು ಉತ್ತಮವಾಗಿ ಕೆಲಸ ಮಾಡಬಹುದಾದ ಸ್ಥಳಗಳನ್ನು ರಚಿಸುವ ಮೂಲಕ ಅವರ ಅತ್ಯುತ್ತಮ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಹೊರತರಲು ನಾವು ಸಹಾಯ ಮಾಡುತ್ತೇವೆ. 30ಕ್ಕೂ ಹೆಚ್ಚು ಸೃಜನಶೀಲ ಮತ್ತು ತಂತ್ರಜ್ಞಾನ ಪಾಲುದಾರ ಬ್ರ್ಯಾಂಡ್‌ಗಳ ಜೊತೆಗೆ, ವರ್ಕ್ ಫ್ರಮ್ ಹೋಮ್ ಮತ್ತು ಕಚೇರಿ ಕೆಲಸ ಸೇರಿದಂತೆ ಕೆಲಸ ನಡೆಯುವ ಅನೇಕ ಸ್ಥಳಗಳಿಗೆ ನಾವು ನವೀನ ಪೀಠೋಪಕರಣಗಳು ಮತ್ತು ಉತ್ಪನ್ನಗಳನ್ನು ವಿನ್ಯಾಸಗೊಳಿಸುತ್ತೇವೆ ಮತ್ತು ತಯಾರಿಸುತ್ತೇವೆ. ಸರಿಸುಮಾರು 770 ಸ್ಥಳಗಳಲ್ಲಿ ನಮ್ಮ ಪರಿಣಿತ ಸ್ಟೀಲ್‌ಕೇಸ್ ಡೀಲರ್ ಗಳ ಸಮುದಾಯ, ಹಾಗೆಯೇ ನಮ್ಮ ಆನ್‌ಲೈನ್ ಸ್ಟೀಲ್‌ಕೇಸ್ ಮಳಿಗೆ ಮತ್ತು ಇತರ ರಿಟೇಲ್ ಪಾಲುದಾರರ ಮೂಲಕ ನಮ್ಮ ಉತ್ಪನ್ನಗಳು ಜೀವ ಪಡೆಯುತ್ತವೆ. ಮಿಚಿಗನ್‌ನ ಗ್ರ್ಯಾಂಡ್ ರಾಪಿಡ್ಸ್‌ ನಲ್ಲಿ ಸ್ಥಾಪಿತವಾದ ಸ್ಟೀಲ್‌ಕೇಸ್ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಯಾಗಿದ್ದು, ಆರ್ಥಿಕ ವರ್ಷ 2024ರಲ್ಲಿ $3.2 ಬಿಲಿಯನ್ ಆದಾಯ ಗಳಿಸಿದೆ. ಜಾಗತಿಕವಾಗಿ ನಮ್ಮ ಒಟ್ಟು 11,300 ಉದ್ಯೋಗಿಗಳು ಮತ್ತು ಡೀಲರ್ ಸಮುದಾಯದ ಜೊತೆ ನಾವು ಜನರು ಮತ್ತು ಜಗತ್ತಿಗಾಗಿ ಕೆಲಸದ ಸ್ಥಳವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನಮ್ಮ ಬಿಸಿನೆಸ್ ಬಳಸಿ ನೆರವಾಗಲು ಜೊತೆಯಾಗುತ್ತೇವೆ.

ಯಾವುದೇ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ-  Munmun Gentle |mgentle@webershandwick.com | +919820623811  Sanchari Mitra |smitra@webershandwick.com| +91 9874354446